ಶನಿವಾರ, ಫೆಬ್ರವರಿ 20, 2010

ಭಾವ ಯಾನ..

ಭಾವ ಲೋಕದ
ಕದವ ತಟ್ಟಿ
ಬಂದಳು
ಒಳಗೆ
ರಚ್ಚೆ
ಮನಕೆ
ತಂಪನೆರೆದು
ನಡೆದಳು
ಹೊರಗೆ...

      ---ಮಹಾಂತೇಶ ದೊಡ್ಡಮನಿ

ಮುಂಜಾವು..

ಮುಂಜಾವಿನ
ಎಳೆ ಬಿಸಿಲು
ಮೂಡಣದಿ ಜಾರಿ
ಕೆಂಪೆರಿದಾವು
ಸಕಲೆಂಟು ಮಾರಿ
ಹೂವ ಎಲೆಗಳ ಮೇಲೆ
ಮುತ್ತನಿಟ್ಟವರಾರು?
ಗಾಳಿ ಧೂಳಿಯೊಳಗೆ
ಗಂಧ ಬೆರೆಸಿದವರಾರು?


   ---ಮಹಾಂತೇಶ ದೊಡ್ಡಮನಿ

ಮರೆಯದಿರು...

ಕಣ್ಣ ಹನಿ
ಜಾರಿ
ಕರಗುವ ಮುನ್ನ
ನೆನಪುಗಳು ಮಾಸಿ
ಮರೆಯಾಗುವ ಮುನ್ನ
ಒಮ್ಮೆಯಾದರು
ನೆನೆಸು
ನಿನ್ನ
ಪ್ರೇಮಿಸುವವನನ್ನ...

  ---ಮಹಾಂತೇಶ ದೊಡ್ಡಮನಿ

ಚುಕ್ಕೆ

ಮನದ
ಮೊಗಸಾಲೆಯಲ್ಲಿ
ಅವಳ
ನೆನಪುಗಳ
ಕಲೆಗಳು...

  ---ಮಹಾಂತೇಶ ದೊಡ್ಡಮನಿ

ಅಭಿಸಾರಿಕೆ

ಅಭಿಸಾರಕೆ
ಬರಲೊಪ್ಪಳು
ಒಣ ಪ್ರೀತಿಯ
ಬರಿ ತೋರ್ಪಳು
ಮನ ಅರಳಿಸಿ
ತನು ಕೆರಳಿಸಿ
ಹೊರ ನಡೆದಳು
ಮನ ನೋಯಿಸಿ...

   ---ಮಹಾಂತೇಶ ದೊಡ್ಡಮನಿ

ಅರ್ಪಿಸುವೆ..

ನಿನ್ನ
ನೆನಪಾಗಿದೆ
ಕಣ್ಣು
ಹನಿಗೂಡಿದೆ
ಮನಸಿನಲಿ
ನಿನ್ನದೇ
ರೂಪ
ಒಡಮೂಡಿದೆ
ನಡೆದೆ ನೀ
ದೂರಕೆ
ಹೇಳದೆ ಕೇಳದೆ...

   ---ಮಹಾಂತೇಶ ದೊಡ್ಡಮನಿ

ಖಾಲಿ ಕಾಗದ

ನನ್ನ
ಮನದ
ಖಾಲಿ
ಕಾಗದದ
ಮೇಲೆ
ಯರ್ರಾ ಬಿರ್ರಿ
ಗೀಚಿದೆ
ಪ್ರೇಮವೆಂಬೆರೆಡಕ್ಷರಗಳ....!

   ---ಮಹಾಂತೇಶ ದೊಡ್ಡಮನಿ

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ
ಕಲ್ಲಾಗುವೆ
ನಿನ್ನ
ನೆನಪುಗಳ
ಬದಿಗಿರಿಸಿ....

   ---ಮಹಾಂತೇಶ ದೊಡ್ಡಮನಿ

ತಿಲಕ

ಹಕ್ಕಿಯಂತೆ
ನನಗೂ
ರೆಕ್ಕೆ
ಇದ್ದಿದ್ದರೆ

ಸೂರ್ಯ ಚಂದ್ರರೇ
ನಿನಗೆ
ತಿಲಕವಾಗಿರುತ್ತಿದ್ದರು...

   ---ಮಹಾಂತೇಶ ದೊಡ್ಡಮನಿ

ಭಾವ ವಿಯೋಗ

ಬರಿದಾದ ಮನ ಬೆಳಗೆ,
ನೀನೆಂದು ಬರುವೆ?
ಬರುವಂತೆ ಕಾಣುತ್ತಿಲ್ಲ
ಮರೆವೇನು ನಿನಗೆ
ಮನ ತುಂಬ ನೀನೆ
ಜಿನುಗುಡುವ ಸೋನೆ
ಮೊದಲೆಲ್ಲ ಜೊತೆಗೂಡಿ
ಪಿಸು ಮಾತು ಒಡಮೂಡಿ
ಗುಂಯ್ ಗುಡುವ ಸದ್ದು
ಬಿಸಿ ಉಸಿರ ಮಾತು
ನೆನಪಾಗಿ ಬರುತಿಹವು
ಕ್ಷಣ ಕ್ಷಣದಿ ಹೊತ್ತು
ಅಲೆ ಬಂದು ಸೆಳೆದಾಯ್ತು
ಬೇರೆಡೆಗೆ ನಿನ್ನ
ನೀ ಮರೆತರೇನಂತೆ?
ನಾ ಮರೆಯೆ ನಿನ್ನ
ಬರಿದಾದ ಮನ ಬೆಳಗೆ,
ನೀನೆಂದು ಬರುವೆ?
ಬರುವವರೆಗೂ ಕಾಯುವುದು
ಈ ಜೀವ ನಿನಗೆ...

   ---ಮಹಾಂತೇಶ ದೊಡ್ಡಮನಿ

ಸಖ(ಕ)

ಅಂದು
ನಿನ್ನ
ಸೌಂದರ್ಯೋಪಾಸಕ
ಇಂದು
ನಿನ್ನ
ಪ್ರೇಮಿಸುವ ಸಖ..

  ---ಮಹಾಂತೇಶ ದೊಡ್ಡಮನಿ

ತರಂಗ

ನಿನ್ನ
ಧ್ವನಿಯ
ತರಂಗದಲೆಗಳ
ಒರೆತಕ್ಕೆ
ನನ್ನ ಮನದಿ
ನೀರಾಡಿತು
ಮೋಡವಿಲ್ಲದೆ..!

   ---ಮಹಾಂತೇಶ ದೊಡ್ಡಮನಿ

ಪರಿಧಿ

ಇರುಳಾದರೆ
ಚಂದ್ರನಂತೆ
ಹಗಲಾದರೆ
ಸೂರ್ಯನಂತೆ
ನಿನ್ನ
ಪ್ರೇಮವನರಸುತ
ಬರುವೆ
ಹಗಲು ರಾತ್ರಿಯನ್ನದೆ..!

  ---ಮಹಾಂತೇಶ ದೊಡ್ಡಮನಿ

ಹೆಜ್ಜೆ ಗುರುತು

ನೀ
ಬಂದ
ಹೆಜ್ಜೆ ಗುರುತು
ಇನ್ನೂ
ನನ್ನ
ಕಣ್ಣ ಮುಂದಿದೆ
ಆಗಲೇ
ನಡೆದೆ ಬಂದ
ಹೆಜ್ಜೆಯ
ಮೇಲೆ
ಮರಳಿ ಬಾರದೂರಿಗೆ...?

   ---ಮಹಾಂತೇಶ ದೊಡ್ಡಮನಿ

ಕಾಲ

ವಿರಹದ
ಬೇಸಿಗೆಯ
ಬೇಗೆಗೆ
ನಿನ್ನ
ಮಾತುಗಳೇ
ಮಳೆಗಾಲ..!
ನಿನ್ನ
ಸುಖ ಸ್ಪರ್ಶವೇ
ಚಳಿಗಾಲ...!

   ---ಮಹಾಂತೇಶ ದೊಡ್ಡಮನಿ

ನಿದಿರೆ

ಕಣ್ಣಾಲಿಗಳಲಿ
ನೀನಿರುವಾಗ
ಕಂಗಳಿಗ್ಯಾತಕೆ
ನಿದಿರೆ?

  ---ಮಹಾಂತೇಶ ದೊಡ್ಡಮನಿ

ಮೌನಿ..

ಸುಮ್ಮನೇಕೆ
ಕುಳಿತೆ?
ನನ್ನ
ಮಾನಸ ಸರೋವರಕ್ಕೆ
ದೊಡ್ಡದೊಂದು
ಅಲೆ
ತರಿಸಿ...?

   ---ಮಹಾಂತೇಶ ದೊಡ್ಡಮನಿ

ವಿಳಾಸ

ನಿನ್ನ
ನೆನಪುಗಳಲ್ಲಿ
ಕಳೆದು ಹೋದ
ನನಗೆ
ಮರಳಿ ಬರುವ
ವಿಳಾಸವೇ
ತಿಳಿದಿಲ್ಲ...!

   ---ಮಹಾಂತೇಶ ದೊಡ್ಡಮನಿ

ಭಾವಲಹರಿ

ರೋಮಾಂಚ ರಾತ್ರಿಯ
ಸವಿ ಭಾವ ಲಹರಿ
ಗುನುಗುನಿತ ಮಾತು
ಪುಟವಿಟ್ಟ ಮುತ್ತು
ಹುಸಿ ಮುನಿಸು ಕೋಪ
ತಣ್ಣನೆಯ ಪ್ರತಾಪ...

  ---ಮಹಾಂತೇಶ ದೊಡ್ಡಮನಿ

ಮುತ್ತು

ನಿನ್ನ
ಕಣ್ಣೀರ
ಹನಿಗಳನ್ನು
ನನ್ನೆದೆಯ
ಚಿಪ್ಪಿನೊಳಗಿರಿಸಿ
ಮುತ್ತಾಗಿಸುವೆ..

   ---ಮಹಾಂತೇಶ ದೊಡ್ಡಮನಿ

ಅಸ್ತ್ರ

ಬಣ್ಣ ರೂಪವಿಲ್ಲದ,
ಗಾತ್ರ ಆಕಾರವಿಲ್ಲದ,
ಕಣ್ಣಿಗೆ ಕಾಣದ,
ನಿನ್ನ ಮನಸೇ
ನನ್ನ
ಕೊಂದ
ಅಸ್ತ್ರ

  ---ಮಹಾಂತೇಶ ದೊಡ್ಡಮನಿ

ಪ್ರೇಮ ಪ್ರಳಯ

ಮವನ ಮೋಡವು ಕರಗಿ
ಮಾತುಗಳ ಹನಿಮುತ್ತು ಸುರಿಯಲಿ
ಬಿಡದೆ..ಬಿಡದೆ..ಬಿಡದೆ...
ಭಾವ ಲಹರಿಯ ಗಾನ
ಕರೆದಂತಾಯಿತು ಮಧುವನ
ಸುಮ್ಮನೇಕೆ ಮೌನ?
ಮಾತುಗಳದ್ದೇ ಆಗಲಿ
ಪ್ರಳಯ..ಪ್ರಳಯ..ಪ್ರಳಯ

  ---ಮಹಾಂತೇಶ ದೊಡ್ಡಮನಿ

ಭಗ್ನ

ಕೈಯ ಮೆಹಂದಿಯ ರಂಗು
ಹಸಿರ ಬಳೆಯ ಗುಂಗು
ಅಣಕಿಸಿದಂತಾಗಿ
ನಿಂತಲ್ಲಿಯೆ
ಕುಸಿದು ಕೂತೆ
ನಿನ್ನ ಮದುವೆಯ ದಿನ...!

  ---ಮಹಾಂತೇಶ ದೊಡ್ಡಮನಿ

ಹೊದಿಕೆ

ಮೈ ಕೊರೆವ
ಚಳಿಗೆ
ಬೆಚ್ಚನೆಯ
ಹೊದಿಕೆ
ಯಾವುದು ಗೊತ್ತೇ?
ನಿನ್ನ
ನವಿರಾದ
ನೆನಪು...

   ---ಮಹಾಂತೇಶ ದೊಡ್ಡಮನಿ

ಮುನ್ನುಡಿ

ಅವಳಿರದ ಮನೆಯು
ಸೂತಕವು ಹೊತ್ತಂತೆ
ಅಡಿಗಡಿಗೆ ನೆನಪಾಗಿ
ಮನಕ್ಯಾರೋ ತಿವಿದಂತೆ
ನೆನಪಲ್ಲೂ ನೆರಳಾಗಿ
ಸುಳಿದಿಹಳು ಬಳಿಗೆ
ಅವಳ ನೆನೆಯದೇ
ಕಳೆಯನು ನಾನೊಂದರೆಘಳಿಗೆ
ನಮ್ಮೀ ಪ್ರೇಮಾಂಕುರಕ್ಕೆ
ಕಣ್ಣುಗಳೇ ಮುನ್ನುಡಿ
ಅವಳ ಇನಿದನಿಯ
ಮಾತುಗಳೇ
ಒಲವ ಬೆನ್ನುಡಿ...

   ---ಮಹಾಂತೇಶ ದೊಡ್ಡಮನಿ

ವದನ

ಇರುಳ
ಬಾನ
ಚಂದ್ರ
ನಿನ್ನ ವದನಕ್ಕೆ
ಹೋಲಿಕೆ

  ---ಮಹಾಂತೇಶ ದೊಡ್ಡಮನಿ

ಭಯೋತ್ಪಾದನೆ

ಅಮಾಯಕರ ಕೆಂಪು ರಕ್ತ
ನಿಮಗೆ
ಹೋಳಿಯ ಬಣ್ಣದಂತೆ
ಕಾಣುವುದೇ?

   ---ಮಹಾಂತೇಶ ದೊಡ್ಡಮನಿ

ಸುನಾಮಿ

ನಿನ್ನ ವಿಯೋಗದಿಂದ
ನನ್ನೊಳ ಮನದಿ
ನಡೆದಿದೆ
ಭಾರಿ ಸುನಾಮಿ

  ---ಮಹಾಂತೇಶ ದೊಡ್ಡಮನಿ

ಅಂ(ಭೃಂ)ಗ

ನಿನ್ನಂಗ ಭೃಂಗವನೇರಿ
ತೃಷೆಯ ತುತ್ತ ತುದಿಗೆ ಜಾರಿ
ಮಧು ಬಟ್ಟಲು ಬರಿದು ಮಾಡಿ
ಏರಿಳಿತವ ಹತ್ತಿ ಇಳಿದು
ಸುಖಿಸಿ ಸುಖಾ ಸುಮ್ಮನೇ
ತಂಪಾಗುವೆ...!

   ---ಮಹಾಂತೇಶ ದೊಡ್ಡಮನಿ

ಮಳೆ

ಹನಿ ಹನಿಯ ಮಾಲೆ
ಭೂ ರಮೆಯ ಮೇಲೆ
ಬಿಡು ಬೀಸಾಗಿ ಹರಿಯುತ್ತಿವೆ
ಯಾವ ಚಿಂತೆ ಇಲ್ಲದೆಲೆ

ನೀನೆ ಉಸಿರಾದೆ
ಹಸಿರ ಪೈರಿಗೆ
ನೀ ಬರದ ಜೀವನ
ಶೂನ್ಯದೆಡೆಗೆ

ನಿನ್ನಿಂದಲೂ ಉಂಟು
ಕಹಿ ಅನುಭವ
ನೀ ಬರದಿದ್ದರೆ
ಎಲ್ಲೆಡೆಯೂ ಜಲಾಭವ

ಅತಿ ವೃಷ್ಟಿ ಅನಾವೃಷ್ಟಿ
ಅಷ್ಟಾದರೂ ಆಗುತ್ತಿದೆಯಲ್ಲ!
ಸೌಭಾಗ್ಯಕ್ಕೆ ಮಾತ್ರ

ಆಗಸದಗಲ ಹರಿದಾಡುವೆ
ಮೋಡಗಳ ಹೊತ್ತು
ಸುರಿಸುವೆ ಧೋ ಧೊ ಎಂದು
ಹನಿ ಹನಿಯ ಮುತ್ತು

  ---ಮಹಾಂತೇಶ ದೊಡ್ಡಮನಿ

ಕವಿತೆ

ಕವಿತೆ ಹುಟ್ಟಲು ಬೇಕೆ

ಹೊತ್ತು ಗೊತ್ತು?
ಅದಕ್ಕಿಲ್ಲ ಯಾವ ಕಾಲ
ಪರಿಮಿತಿಯ ಗೊತ್ತು


ಮುಂಜಾನೆ ಮಧ್ಯಾಹ್ನ ಪ್ರಾತಃಕಾಲ
ಯಾವ ಕಾಲವಾದರೂ ಸರಿಯೇ
ಮೂಡುವುದು ಕಡೆದ ಬೆಣ್ಣೆಯ ಹಾಗೆ


ಮಳೆಗಾಲ ಚಳಿಗಾಲ ಬೇಸಿಗೆಗಾಲ
ಯಾವ ಕಾಲದಲ್ಲಾಗಲಿ ಫಸಲು
ಕೊಡುವುದು ಹೆಕ್ಕಿ ಹೆಕ್ಕಿ


ಜಾತಿ ಮತ ಪಂಥ ಅದಕ್ಕಿಲ್ಲ ಗೊತ್ತು
ಯಾವಾಗಲೆಂದರೆ ಆವಾಗ ಬರುವುದು
ಅಕ್ಷರಗಳ ದಿಬ್ಬಣ ಹೊತ್ತು


ಕವಿತೆ ಹುಟ್ಟಲು ಬೇಕೆ
ಹೊತ್ತು ಗೊತ್ತು?
ಅದಕ್ಕಿಲ್ಲ ಯಾವ ಕಾಲ
ಪರಿಮಿತಿಯ ಗೊತ್ತು?

---ಮಹಾಂತೇಶ ದೊಡ್ಡಮನಿ

ರೈತ

ಹುಟ್ಟಿ ಮಣ್ಣಿನೊಳಗೆ
ಮಡಿವೆ ಮಣ್ಣಿನೊಳಗೆ

ಇವ ರಾಷ್ಟ್ರದ ಬೆನ್ನೆಲುಬು
ಹೇಳುವವರು ಹಲವರು

ಮಳೆ ಬಾರದೆ ಸತ್ತರೆ
ಹೆಣವನೆತ್ತಲು ಬಾರರು

   ---ಮಹಾಂತೇಶ ದೊಡ್ಡಮನಿ

ಕನ್ನಡ ನಾಡು

ಕನ್ನಡ ನಾಡಿದು
ಕವಿಗಳ ಬೀಡಿದು
ವೀರ ಕಲಿಗಳ
ಹೆತ್ತೊಡಲಿದು

ಭವ್ಯ ಸಂಸ್ಕೃತಿಯ
ತವರೂರಿದು
ಗಂಧ ಶ್ರೀಗಂಧವ
ಸೂಸಿದ ನಾಡಿದು

ಕಲೆ ಸಾಹಿತ್ಯದಿ
ಮೆರೆದಿಹುದು
ತ್ಯಾಗ ಪ್ರೀತಿಗೆ
ಮೊದಲಿಹುದು

ಕನ್ನಡ ವೈರಿಯ
ಮನವನು ಒಲಿಸಿ
ಕನ್ನಡ ಭಾಷೆಯ
ಬೆಳೆಸಿಹುದು

ಕವಿ ಪುಂಗವರನು
ಸ್ಮರಿಸೋಣ
ನಾಡಗೀತೆಯನು
ಹಾಡೋಣ

ಕನ್ನಡಕ್ಕಾಗಿ
ಮಡಿಯೋಣ
ಕನ್ನಡ ನೆಲದಿ
ಜನಿಸೋಣ

    ---ಮಹಾಂತೇಶ ದೊಡ್ಡಮನಿ

ಒಲವ ರಂಗೋಲಿ

ನನ್ನೆದೆಯ
ಪ್ರಾಂಗಣ ಗುಡಿಸಿ
ಚುಕ್ಕೆ ಸೇರಿಸಿ
ಬರೆದೆ ಒಲವ ರಂಗೋಲಿ

  ---ಮಹಾಂತೇಶ ದೊಡ್ಡಮನಿ

ಸೀ(ನೀ)ರೆ

ಜರಿ ಜರತಾರಿ
ಸೀರೆಯಲ್ಲಿ
ಮೈಮನಸೂರೆಗೊಳ್ಳುವ
ನೀರೆ
ನನ್ನ ಮನದಂಗಳಕ್ಕೊಮ್ಮೆ
ಕಾಲಿರಿಸು ಬಾರೆ..

   ---ಮಹಾಂತೇಶ ದೊಡ್ಡಮನಿ

ಕಾಯುವೆ...

ಜೀವ
ಪಣಕ್ಕಿಟ್ಟು
ಕಾಯುವೆ
ಮುಂದಿನ
ಜನ್ಮಕ್ಕಾದರೂ
ನೀ
ನನ್ನವಳಾಗುವೆಯೆಂದು

    ---ಮಹಾಂತೇಶ ದೊಡ್ಡಮನಿ

ಗ್ರಹಣ

ಕೆಂಪು ಚಂದಿರನ
ಬೆಳಕ ಬೆರಗು
ನಿನ್ನ ಮೊಗದ ನಗು
ನೀ ನಕ್ಕಾಗ ತುಟಿ-
-ಯಂಗಳದಿ
ಪೂರ್ಣ ಪೌರ್ಣಿಮೆ
ನನ್ನ ಮೇಲೆ
ಮುನಿಸು ಬಂದಾಗ
ಗ್ರಹಣ ಗೋಚರ

   ---ಮಹಾಂತೇಶ ದೊಡ್ಡಮನಿ

ಪ್ರಳಯ

ನಿನ್ನ ಕಣ್ಣ
ಕಂಬನಿಯ
ಪ್ರಳಯಕ್ಕೆ
ನಾ ಇನ್ನಿಲ್ಲದಂತೆ
ಕೊಚ್ಚಿ ಹೋದೆ

   ---ಮಹಾಂತೇಶ ದೊಡ್ಡಮನಿ

ಪಯಣ

ತಣ್ಣಗೆ ಸೋಕಿದಂತಾಗಿ
ನಿನ್ನ ನೆನಪಿನ ಬಾಣ
ಒಡನೆಯೇ
ನಡೆಸಿತು
ನಿನ್ನೆಡೆಗೆ
ನನ್ನ ಮನ ಪಯಣ

   ---ಮಹಾಂತೇಶ ದೊಡ್ಡಮನಿ

ದಿವ್ಯೌಷಧ

ನಗುವ ಮೊಗದಲ್ಲೇಕೆ
ವಿಷಾದ
ನೀ ನಕ್ಕರದೇ
ನನಗೆ ದಿವ್ಯೌಷಧ

   ---ಮಹಾಂತೇಶ ದೊಡ್ಡಮನಿ

ಸೂತಕ

ನೀ ನನ್ನೆದೆಯ
ಬಾಂದಳದಿಂದ
ದೂರ ಸರಿದಾದ ಮೇಲೆ
ನನ್ನ ಮನವೀಗ
ಸೂತಕದ ಒಡಲಾಗಿದೆ

     ---ಮಹಾಂತೇಶ ದೊಡ್ಡಮನಿ

ಟಪಾಲು

ತಡಮಾಡದೆ
ಸ್ವೀಕರಿಸು
ನನ್ನೊಲವಹವಾಲು
ಬರೆದೆ ನಿನಗೋಸ್ಕರವೇ
ಈ ಪ್ರೇಮ ಟಪಾಲು
  
  ---ಮಹಾಂತೇಶ ದೊಡ್ಡಮನಿ

ನಿಮಿಷ

ನಿನ್ನೊಡನೆ
ಕಳೆದ ವರುಷ
ಅದು ನನಗೆ
ಬರೀ ನಿಮಿಷ

   --ಮಹಾಂತೇಶ ದೊಡ್ಡಮನಿ

ಚುಂಬನ

ಹಸಿರ ಹೊತ್ತ
ಭುವನ ಸಿರಿಗೆ
ಬಾನ ರವಿಯ
ಚುಂಬನ

ಅರಳಿ ನಿಂತ
ಹೂವ ಬನಕೆ
ದುಂಬಿಯಿಂದ
ಸಾಲು ಸಾಲು
ಚುಂಬನ

ನಲ್ಲೆ ಮೊಗಕೆ
ನಲ್ಲನೀವ
ಅಧರದಿಂದ
ಜೇನ ಸವಿಯ
ಚುಂಬನ

    ---ಮಹಾಂತೇಶ ದೊಡ್ಡಮನಿ

ಹೋಲಿಕೆ

ನೀನು ಮೌನವಾಗಿದ್ದರೆ
ಕಪ್ಪು ತುಂಬಿದ
ಭಾರಿ ಮೋಡ
ಮುನಿಸು ಬಿಟ್ಟು
ತುಟಿಯಂಚಿಂದ
ಮುಗುಳು ನಕ್ಕರೆ
ತುಂತುರು ಮಳೆ
ಕೋಪಿಸಿಕೊಂಡು
ಗುಡುಗಿದರೆ
ಗುಡುಗು ಮಿಂಚಿನ
ಭಾರಿ ಮಳೆ
  ---ಮಹಾಂತೇಶ ದೊಡ್ಡಮನಿ

ಮೈನಾ

ಕಣ್ಣೀರಿಗಿಲ್ಲ ಇಲ್ಲಿ
ಯಾವ ಸೇತುವೆ
ಕರುಳ ಬಂಧದ ಮುಂದೆ
ಇಹುದಾವ ಹೋಲಿಕೆ?

   ---ಮಹಾಂತೇಶ ದೊಡ್ಡಮನಿ

ಅರ್ಪಣೆ

ಕಣ್ಣಲ್ಲೇ ಮಾತನಾಡಿ
ಸನ್ನೆಯಲ್ಲಿ ಸ್ವರ್ಗ ತೋರಿ
ಗಾಳಿಯಲ್ಲಿ ಮುತ್ತು ತೂರಿ
ಕಿಲಕಿಲನೆ ನಗುವ ಕಿನ್ನರಿ
ನಿನಗೋಸ್ಕರವೇ ಈ ಕಾವ್ಯ ಕುಸುರಿ
  ---ಮಹಾಂತೇಶ ದೊಡ್ಡಮನಿ

ಮಾತೃ ವಿಯೋಗ

ಉಳಿಸಿ ಕಣ್ಣ ನೀರ
ನೀವು ಹೋದಿರೆಲ್ಲಿಗೆ?
ಸುಮ್ಮನೆದ್ದು ನಡೆದು ಬಿಟ್ರಿ
ಹೇಳದೇನೆ ಮೆಲ್ಲಗೆ

    ---ಮಹಾಂತೇಶ ದೊಡ್ಡಮನಿ

ದುಶ್ಶ್ಯಂತ

ಎಲೈ, ಶಾಕುಂತಲೆ
ನಿನ್ನ ವರಿಸಲು ಬಂದ
ದುಶ್ಶ್ಯಂತ ನಾನಲ್ಲ..
ನಿನ್ನ ಪ್ರೇಮಿಸುವ
ಬರೀ ನಲ್ಲ..!

         ---ಮಹಾಂತೇಶ ದೊಡ್ಡಮನಿ

ನೆನಪು

ನಿನ್ನ ನೆನಪುಗಳೇ
ಹಾಸಿ ಹೊದ್ದು ಮಲಗಿರುವಾಗ
ಇನ್ನಾವುದರ
ಪರಿವೆ ನನಗೆ?

      --- ಮಹಾಂತೇಶ ದೊಡ್ಡಮನಿ