ಶನಿವಾರ, ಫೆಬ್ರವರಿ 20, 2010

ಕವಿತೆ

ಕವಿತೆ ಹುಟ್ಟಲು ಬೇಕೆ

ಹೊತ್ತು ಗೊತ್ತು?
ಅದಕ್ಕಿಲ್ಲ ಯಾವ ಕಾಲ
ಪರಿಮಿತಿಯ ಗೊತ್ತು


ಮುಂಜಾನೆ ಮಧ್ಯಾಹ್ನ ಪ್ರಾತಃಕಾಲ
ಯಾವ ಕಾಲವಾದರೂ ಸರಿಯೇ
ಮೂಡುವುದು ಕಡೆದ ಬೆಣ್ಣೆಯ ಹಾಗೆ


ಮಳೆಗಾಲ ಚಳಿಗಾಲ ಬೇಸಿಗೆಗಾಲ
ಯಾವ ಕಾಲದಲ್ಲಾಗಲಿ ಫಸಲು
ಕೊಡುವುದು ಹೆಕ್ಕಿ ಹೆಕ್ಕಿ


ಜಾತಿ ಮತ ಪಂಥ ಅದಕ್ಕಿಲ್ಲ ಗೊತ್ತು
ಯಾವಾಗಲೆಂದರೆ ಆವಾಗ ಬರುವುದು
ಅಕ್ಷರಗಳ ದಿಬ್ಬಣ ಹೊತ್ತು


ಕವಿತೆ ಹುಟ್ಟಲು ಬೇಕೆ
ಹೊತ್ತು ಗೊತ್ತು?
ಅದಕ್ಕಿಲ್ಲ ಯಾವ ಕಾಲ
ಪರಿಮಿತಿಯ ಗೊತ್ತು?

---ಮಹಾಂತೇಶ ದೊಡ್ಡಮನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ